ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯ ನಮಃ
856
|| ಓಂ ಶ್ರೀ ಗುರು ಅಕ್ಕಮಹಾದೇವಿ ಲಿಂಗಾಯನಮಃ ಓಂಕಾರ ಮಂತ್ರೆ,ವಿಭೂತಿ, ರುದ್ರಾಕ್ಷಿ.ಪ್ರಿಯೆ ವಿಶ್ವಗುರು, ಜಗನ್ಮಾತೆ ಅಕ್ಕಮಹಾದೇವಿ ವೀರಶೈವ ಲಿಂಗಾಯಿತ ಧರ್ಮ ಉಧ್ಧಾರ ಮಾಡಿದ ಗುರುವಿಗೆ ನಮೋ
ವಿಶ್ವದ ಪ್ರಥಮ ಕನ್ನಡದ ಮಹಿಳೆ. ಮಹಿಳೆಯರಿಗೆ ಸ್ವಾಭಿಮಾನದ ಪ್ರಥಮಪಾಠ ಹೇಳಿದ ಗುರು ಮಹಾದೇವಿ. ಮಹಿಳೆಯರಿಗೆ ತಮ್ಮ ಆತ್ಮ ಬಲವನ್ನು ಬೆಳೆಸಿಕೊಳ್ಳಲು ಸೂಚಿಸಿದ ಮೊದಲನೆಯ ಮಾರ್ಗದ
BHRAMARAMBHA B R
veerashiva lingyatha
AMBIGA NA NENNA NAMBEDE
ಅಕ್ಕಮಹಾದೇವಿಯವರ ನೀಜವಾದ ರೂಪ
Who I am
AKKAMAHADEVI BIRTH
ವಿಶ್ವಗುರು ಅಕ್ಕಮಹಾದೇವಿ
ಜನನ: 1130---1160
ಜನ್ಮಸ್ಥಳ : ಉಡುತಡಿ
ಪೋಷಕರು: ಲಿಂಗಮ್ಮ ಓಂಕಾರಶೆಟ್ಟಿ
ಧರ್ಮ : ವೀರಶೈವಲಿಂಗಾಯತ (ಒಳಪಂಗಡಕೊರಿಶೆಟ್ಟರು, ಸಜ್ಜನಶೆಟ್ಟರು)
ಲಿಂಗೈಕ್ಯಸ್ಥಳ: ಶ್ರೀಶೈಲಕದಳಿವನ.
ಯೋಗಾಂಗತ್ರಿವಿಧಿ, ಮಂತ್ರಗೊಪ್ಯ, ಸ್ವರವಚನ
ವಚನಗಳು, ಸೃಷ್ಟಿಯವಚನ, ಕವಿತೆ , ಶಿವಹಾಡು, ಮಂಗಳಾರತಿಹಾಡು ಇತರೆ
ಈ ವಚನವನ್ನು ಎರಡು ನೆಲೆಯಲ್ಲಿ ನೋಡಬಹುದು. 1. ಅಕ್ಕಮಹಾದೇವಿಯವರು ಹೆಣ್ಣು ತರುಣಿ ಚೆಲುವೆ, ಒಂಟಿ ಎನ್ನುವ ಕಾರಣಕ್ಕೆ ಅನೇಕರು ತೊಂದರೆ ನೀಡಿದರು. ಆದರೆ
ಶ್ರೀ ಶೈಲದಲ್ಲಿ ಇಂತಹ ತೊಂದರೆಗಳು ಹೋದವು.ವಿನಾಕಾರಣ ಕಾಮುಕ ದೃಷ್ಟಿ ಯಿಂದ ನೋಡಿ ಅನುಭಾವಜೀವನಕ್ಕೆ ಅಡ್ಡಿಯುಂಟುಮಾಡಲು ಪ್ರಯತ್ನಿಸಿದರು. ಅಂತಹವರಿಗೆ ಈ ಉತ್ತರ. ಇದನ್ನು ಮೊದಲು ಪುರಾಣದ ನೆಲೆಯಿಂದ ನೋಡೋಣ.
ಕಾಮನ ತಲೆಯ ಕೊರೆದು ಕಾಲನ ಕಣ್ಣ ಕಳೆದು, ಕಾಮನತಲೆ ಕತ್ತರಿಸಿ, ಮೃತ್ಯು ವಿನ ಕಣ್ಣನ್ನು ಕಿತ್ತು,ಸೋಮಸೂರರ ಹುರಿದು ಹುಡಿ ಮಾಡಿತಿಂಬವಳಿಂಗೆ -ಚಂದ್ರ, ಸೂಯ್ಯರನ್ನೆ ಪುಡಿ ಮಾಡಿ ಹುರಿದುಕೊಂಡು ಮುಕ್ಕುವವಳಿಗೆ ನೀವು ಹೆಸರನ್ನು ಇಟ್ಟು ನೋಡಲು ಬಂದಿರೇನು? ನಾನು ಹೆಣ್ಣು ಎಂದು ಬಂದಿರಾ? ನನ್ನನ್ನು ಅನುಭವಿ ಸಲು ಬಂದಿರಾ? 'ನನಗೆ ಚೆನ್ನಮಲ್ಲಿಕಾರ್ಜುನನೆ ವರ ನಾನೆವಧು. ಮೃತ್ಯುವನ್ನು
ಬಿರುಗಾಳಿ ಸೇರಿದರೆ ಏನು ಅನಾಹುತವೋ ಅದೆಲ್ಲವೂ ಈಗಲೆ. ಕಾಲಭೈರವ ನಾಟ್ಯಕ್ಕೆ ನಿಂತರೆ ಅಲ್ಲಿ ಯಾವುದಕ್ಕೂ ಉಳಿಗಾಲವಿಲ್ಲ. ಇನ್ನು ದುರ್ಗೆಯಾಗಿ ಬಿಲ್ಲು ಬಾಣ ಹಿಡಿದು ಯುದ್ಧಕ್ಕೆ ನಿಂತರ ಮುಗಿದೆ ಹೋಯಿತು.ಎಲ್ಲವೂ ಸರ್ವನಾಶ.
ಏನೇ ಇರಲಿ ದುಷ್ಟ ಮನುಷ್ಯನ ವಿರುದ್ದ ಅಕ್ಕನವರು ತಿರುಗಿಬಿದ್ದ ಜಗನ್ಮಾತೆ ಮಾತುಗಳು ಈವಚನದಲ್ಲಿವೆ.
ಮನ್ಮಥನ ತಲೆಯನ್ನೆ ಕತ್ತರಿಸಿ,ಮೃತ್ಯುವಿನಕಣ್ಣನ್ನೆ ಕಿತ್ತು ಚಂದ್ರ, ಸೂರರನ್ನೆ;ಹು ರಿದು ಹುಡಿಮಾಡಿತಿಂದು ಬಿಡುವ ನನಗೆ ಹೆಣ್ಣು ಎಂದು ಹೇಳುವವರಾರು? ಶಿವನೆ ಕಾಲಭೈರವ-ನಾನೆ ದುರ್ಗಾದೇವಿ. ಮೃತ್ಯುವನ್ನು ಬಿರುಗಾಳಿಸೇರಿದರೆ, ಪ್ರಳಯದ ಲಯ, ಭಯಂಕರ. ಉಳಿಯುವವರಾರು? ಈಭೈರವ-ದುರ್ಗೆಯರ ಮುಂದೆ?.
ಉಡುವೆನಾನು ಲಿಂಗಕ್ಕೆಂದು ತೊಡುವೆ ನಾನು ಲಿಂಗಕ್ಕೆಂದು ಮಾಡುವೆ ನಾನು ಲಿಂಗಕ್ಕೆಂದು ನೋಡುವೆ ನಾನು ಲಿಂಗಕ್ಕೆಂದು ಉಡುವ ತೊಡುವ ಮಾಡುವ . 'ನೋಡುವ ಎಲ್ಲ ಕ್ರಿಯೆಗಳನ್ನು ಲಿಂಗಕ್ಕೆಂದೆ ಮಾಡುವ ಸದಾಚಾರವನ್ನು ಅಕ್ಕನವರು ಮೈಗೂಡಿಸಿಕೊಂಡಿದ್ದಾರೆ. ಎನ್ನಂತರಂಗಗಳು ಬಹಿರಂಗಗಳು ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ. ನನ್ನ ಅಂತರಂಗ ಬಹಿರಂಗದಲ್ಲಿ ಪರಮಾತ್ಮನ ಧ್ಯಾನ ತುಂಬಿದೆ.ಯಾವುದೆ ಕ್ರಿಯೆಗಳನ್ನು ಮಾಡಿದರೂ ಅವುಗಳನ್ನು ಪರಮಾತ್ಮನಿಗೆಂದೆ ಮಾಡುತ್ತಾರೆ. ಚೆನ್ನಲ್ಲಿಕಾರ್ಜುನನೊಳಗಾಗಿ ಹತ್ತರೊಳಗೆ ಹನ್ನೊಂದಾಗಿಪ್ಪೆನಯ್ಯ. ಚೆನ್ನ ಮಲ್ಲಿಕಾರ್ಜುನನಿಗಾಗಿ ಬದುಕಿರುವ ಈ ಜೀವ ಹತ್ತರಲ್ಲಿ ಹನ್ನೊಂದನೆಯವಳಾಗಿ ಸಹಜವಾಗಿರುವೆನು. ಇದು ನಾನು ಎನ್ನುವ ಭಾವಹೋದ ಘಟ್ಟ ತಪಸ್ಸಿನಲ್ಲಿ ಹಲವು ಕಾಲ ಕಳವಳಿಸಿ ಮನಸ್ಸು ಏರಿದ ಎತ್ತರ ಇದು. ಜೀವನದ ಕಟುಸತ್ಯದ ದರ್ಶನ ದಿಂದ ನನ್ನಮಿತಿ ಏನು? ಎನ್ನುವುದರ ಸತ್ಯವೂ ಆಯಿತು ದೇಹವಿಡಿದು ಬದು ಕುವುದು ಅನಿವಾಯ್ಯ. ಈಲೋಕದ ಹಂಬಲಗಳನ್ನು ಬಿಟ್ಟು ತಪಸ್ಸಿಗೆ ಬಂದರು.ಅನು ಭಾವಜೀವನ ಸಡೆಸಬೇಕಾದರೂ ದೇಹ, ಇಂದ್ರಿಯಗಳು ಬೇಕು. ನನಗಾಗಿ ದೇಹ ಪೋಷಣೆ ಮಾಡದಿದ್ದರೂ ಅನುಭಾವ ಜೀವನಕ್ಕಾಗಿಯಾದರೂ ದೇಹ ಪೋಷಿಸಲೇಬೇಕು. ಉಡುವೆ ನಾನು ಲಿಂಗಕ್ಕೆಂದು ತೊಡುವೆ ನಾನು ಲಿಂಗಕ್ಕೆಂದು ದೇವರ ಬಗೆಗೆ ಖಚಿತ ಸತ್ಯವು ಮೂಡಿದ ಮೇಲೆ ರುದ್ರಾಕ್ಷ ಧಾರಣೆಯ ಹಾಗೆ ಚಳಿ, ಮಳೆ, ಬಿಸಿಲು, ಗಾಳಿ ಕಾರಣವಾಗಿ ಕೂದಲುಡುಗೆಯಾದರೂ ಅಗತ್ಯವೆಂದು ಅನಿಸಿರಬೇಕು.ಕಾವಿಯ ವಲ್ಕಲ,ಬಿಳಿಯ ಉಡುಗೆಗಳು ಇದ್ದಿರಲೂ ಬಹುದು. ನನಗಾಗಿ ಬದುಕುವುದು ಹೋಯಿತು. ಇನ್ನು ಬದುಕುವುದೇನಿದ್ದರೂ ನಿನಗಾಗಿ. ನನ್ನ ಅಂತರಂಗ ಬಹಿರಂಗವೆಲ್ಲ ನಿನಗಾಗಿ ನಾನಿನ್ನು ನನ್ನ ದೇವನೊಳಗಾಗಿ ಹತ್ತರಲ್ಲಿ ಹನ್ನೊಂದಾಗಿ ಬಾಳುತ್ತೇನೆ. ಅರಮನೆ,ರಾಣಿ ಪದವಿಯನ್ನೆ ಬಿಟ್ಟು, ಬಂದೆ ಎನ್ನುವ ನೀನು ಈರುದ್ರಾಕ್ಷೆ, ಜಪಮಣಿ,ಕಾವಿವಲ್ಕಲ, ಕೂದಲ ವಸ್ತ್ರಗಳ ನ್ನಾದರೂ ಯಾರಿಗಾಗಿ ಉಡುವೆ? ಯಾರಿಗಾಗಿಯಾದರೂ ಬದುಕುವೆ ?ಇತರ ಪ್ರಶ್ನೆಗಳನ್ನು ಕೇಳಿದವರಿಗೆ ಅವರು ಹೀಗೆ ಉತ್ತರಿಸಿದ್ದಾರೆ. ಅಕ್ಕನವರು ಅವರ ಪ್ರತಿಭೆ.ತಪಸ್ಸು ವಚನಗಳು, ಜ್ಞಾನೋಪದೇಶ ವೈರಾಗ್ಯ ಕಾರಣವಾಗಿ ಲೋಕೋತ್ತರವಾದ ಪ್ರಸಿದ್ಧಿಪಡೆದರು. ಆದರೂ ನಾನು ಹತ್ತರಲ್ಲಿ ಹನ್ನೊಂದಾಗಿ ಇರುವೆನೆಂದು ಹೇಳಿದ್ದಾರೆ. ಪ್ರಸಿದ್ದಿ ಕೀರ್ತಿಗಳು ಯಾರಿಗೆ ಬೇಕು.ಅಕ್ಕನವರಿಗೆ ಪರಮಾತ್ಮ ಬೇಕು।
We use cookies to analyze website traffic and optimize your website experience. By accepting our use of cookies, your data will be aggregated with all other user data.